ಲೋಕಸಭೆಯಲ್ಲಿ ರಾಷ್ತ್ರಪತಿಯವರ ಭಾಷಣಕ್ಕೆ ಧನ್ಯವಾದ ಉತ್ತರವನ್ನು ನೀಡುತ್ತಾ , ಎನ್ ಡಿಎ ಸರ್ಕಾರದ ಕಳೆದ ಮೂರು ವರ್ಷಗಳಲ್ಲಿ ವಸತಿ ಮತ್ತು ರೈಲ್ವೆಯಲ್ಲಿ ಅಭೂತಪೂರ್ವ ಪ್ರಗತಿಯಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು . ಯುಪಿಎ ಸರ್ಕಾರದಡಿಯಲ್ಲಿ ಕೇವಲ 10, 83,000 ಮನೆಗಳನ್ನು ನಿರ್ಮಿಸಲಾಗಿತ್ತು , ಅದೇ ಏನ್ ಡಿಎ ಸರ್ಕಾರದಡಿಯಲ್ಲಿ 22, 27, 000 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು . ಶ್ರೀ ಮೋದಿ ರೈಲ್ವೆ ಜಾಲದಲ್ಲಿ ಬ್ರಾಡ್ ಗೇಜ್ ವಿಸ್ತರಣೆ ಬಗ್ಗೆ ವ್ಯಾಖ್ಯಾನಿಸಿದರು , ಏನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಸರಿಸುಮಾರು ದ್ವಿಪಟ್ಟು ಆಗಿದೆ ಎಂದು ಹೇಳಿದರು .
Login or Register to add your comment