ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಶೈಕ್ಷಣಿಕ ಕೋಶ (ಎನ್.ಎ.ಡಿ.) ಸ್ಥಾಪನೆ ಮತ್ತು ಕಾರ್ಯಾರಂಭಕ್ಕೆ ತನ್ನ ಅನುಮೋದನೆಯನ್ನು ನೀಡಿದೆ. ಡಿಜಿಟಲ್ ಇಂಡಿಯಾಕ್ಕೆ ಮತ್ತೊಂದು ಆಯಾಮ ಮತ್ತು ಹೆಚ್ಚಿನ ದೃಷ್ಟಿ ನೀಡುವುದು ಈ ನಿರ್ಧಾರದ ಗುರಿಯಾಗಿದೆ.
ಎನ್.ಎ.ಡಿ.ಯನ್ನು ಮುಂದಿನ ಮೂರು ತಿಂಗಳುಗಳ ಒಳಗೆ ಸ್ಥಾಪಿಸಿ, ಕಾರ್ಯಾರಂಭಗೊಳಿಸಲಾಗುತ್ತದೆ ಮತ್ತು 2017-18ರಲ್ಲಿ ಅದು ದೇಶದಾದ್ಯಂತ ಕಾರ್ಯಾರಂಭ ಮಾಡಲಿದೆ.
ಈ ವರ್ಷ ಫೆಬ್ರವರಿಯಲ್ಲಿ ಹಣಕಾಸು ಸಚಿವರು ತಮ್ಮ 2016-17ನೇ ಸಾಲಿನ ಬಜೆಟ್ ಭಾಷಣದಲ್ಲಿ, ಭದ್ರತಾ ಕೋಶಗಳ ರೀತಿಯಲ್ಲಿಯೇ ಉನ್ನತ ಶಿಕ್ಷಣ ಸಂಸ್ಥೆಗಳ ಇತರ ಶೈಕ್ಷಣಿಕ ಕೋರ್ಸ್ ಗಳಲ್ಲಿ, ಪದವಿಗಳಲ್ಲಿ ಮತ್ತು ಪ್ರೌಢ ಶಿಕ್ಷಣ ಕಲಿಕೆಯಲ್ಲಿ ಡಿಜಿಟಲ್ ಕೋಶ ಸ್ಥಾಪಿಸುವ ಬದ್ಧತೆಯನ್ನು ಪ್ರಕಟಿಸಿದ್ದರು.
ಎನ್.ಎ.ಡಿ. ಅನ್ನು ಸೆಕ್ಯೂರಿಟೀಸ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕಾಯಿದೆ 1992ರಡಿ ನೋಂದಣಿಯಾಗಿರುವ ಎನ್.ಎಸ್.ಡಿ.ಎಲ್. ದತ್ತಾಂಶ ನಿರ್ವಹಣೆ ನಿಯಮಿತ (ಎನ್.ಡಿ.ಎಂ.ಎಲ್.) ಮತ್ತು ಸಿಡಿಎಸ್.ಲ್ ವೆಂಚರ್ಸ್ ನಿಯಮಿತ (ಸಿವಿಎಲ್) –ಎರಡು ಅಂಗಸಂಸ್ಥೆಗಳ ಮೂಲಕ ಕಾರ್ಯಾನುಷ್ಠಾನಗೊಳಿಸಲಾಗುತ್ತದೆ.
ಈ ವ್ಯವಸ್ಥೆಗೆ ಡಿಜಿಟಲ್ ಮೂಲಕ ತಾವು ಅಪ್ ಲೋಡ್ ಮಾಡಿದ ದತ್ತಾಂಶದ ನಿಖರತೆಗೆ ಆಯಾ ಶೈಕ್ಷಣಿಕ ಸಂಸ್ಥೆಗಳೇ ಜವಾಬ್ದಾರವಾಗಿರುತ್ತವೆ. ಈ ಕೋಶಗಳು ಎನ್.ಎ.ಡಿಯಲ್ಲಿರುವ ದತ್ತಾಂಶದ ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುತ್ತದೆ. ಎನ್.ಎ.ಡಿ. ಶೈಕ್ಷಣಿಕ ಸಂಸ್ಥೆಗಳು/ಮಂಡಳಿಗಳು /ಅರ್ಹತೆಯ ನಿರ್ಧರಣೆ ಕಾಯಗಳು, ವಿದ್ಯಾರ್ಥಿಗಳು ಮತ್ತು ಇತರ ಬಳಕೆದಾರರು/ಬ್ಯಾಂಕ್ ರೀತಿಯಲ್ಲಿ ಪರಿಶೀಲನಾ ಕಾಯಗಳು, ಮಾಲೀಕ ಕಂಪನಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ನೋಂದಣಿ ಮಾಡುತ್ತದೆ.
ಇದು ವಿದ್ಯಾರ್ಥಿಗಳು ಮತ್ತು ಇತರ ದೃಢೀಕೃತ ಬಳಕೆದಾರರಿಗೆ ಸುರಕ್ಷತೆಯೊಂದಿಗೆ ಡಿಜಿಟಲ್ ಅಥವಾ ಮುದ್ರಿತ ಪ್ರತಿಗಳನ್ನು ಒದಗಿಸುತ್ತದೆ. ಯಾವುದೇ ಅಧಿಕೃತ ಬಳಕೆದಾರರಿಂದ ಮನವಿ ಬಂದ ದಿನವೇ ಎನ್.ಎ.ಡಿ. ಶೈಕ್ಷಣಿಕ ಪ್ರದಾನಗಳ ಆನ್ ಲೈನ್ ಪರಿಶೀಲನೆ ಕೈಗೊಳ್ಳುತ್ತದೆ.
ಶೈಕ್ಷಣಿಕ ಅವಾರ್ಡ್ ಗಳ ನಿರ್ಧರಣೆಯ ಮನವಿಯನ್ನು ಉದಾಹರಣೆಗೆ, ಸಂಭಾವ್ಯ ಮಾಲೀಕರು ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಬಂದಾಗ ವಿದ್ಯಾರ್ಥಿಯ ಸಮ್ಮತಿ ಪಡೆದು ನೀಡಲಾಗುತ್ತದೆ.
ಎನ್.ಎ.ಡಿ. ತನ್ನ ದತ್ತಾಂಶದ ಗೌಪ್ಯತೆ, ವಿಶ್ವಾಸಾರ್ಹತೆ ಮತ್ತು ನಿಖರತೆಯನ್ನು ಕಾಪಾಡಿಕೊಳ್ಳುತ್ತದೆ. ಅಲ್ಲದೆ ಇದು ದತ್ತಾಂಶದಲ್ಲಿ ಸಮರ್ಥವಾಗಿ ಶೈಕ್ಷಣಿಕ ಪ್ರದಾನಗಳನ್ನು ಅಳವಡಿಸಲು ಶೈಕ್ಷಣಿಕ ಸಂಸ್ಥೆಗಳು/ಮಂಡಳಿಗಳು/ಅರ್ಹತೆ ನಿರ್ಧರಣೆಯ ಕಾಯಗಳಿಗೆ ತರಬೇತಿ ಮತ್ತು ಅವಕಾಶ ನೀಡುತ್ತದೆ.