ಭಾರತೀಯ ರಿಸರ್ವ್ ಬ್ಯಾಂಕ್ ನಂತಹ ಸಂಸ್ಥೆಗಳ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ರಾಜ್ಯ ಸಭೆಯಲ್ಲಿ ಮಾತನಾಡುತ್ತಾ , ಪ್ರಧಾನ ಮಂತ್ರಿ ನರೇಂದ್ರ ಮೋದಿಹೇಳಿದರು . "ನನ್ನ ಅಥವಾ ನನ್ನ ಪಕ್ಷದ ಅಥವಾ ನನ್ನ ಸರ್ಕಾರದ ಮೇಲೆ ದಾಳಿ ಅರ್ಥವಾಗುವಂತಹದ್ದಾಗಿದೆ ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ನಂತಹ ಸಂಸ್ಥೆಗಳನ್ನು ರಾಜಕೀಯವಾಗಿಸುವುದು ಸರಿಯಲ್ಲ . ಅದರ ಪಾವಿತ್ರ್ಯತೆಯನ್ನು ಕಾಪಾಡಬೇಕು. " ಆರ್ ಬಿಐ ನಮ್ಮ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ನಾವು ಇದರ ಕಡೆಗೆ ಧನಾತ್ಮಕ ಕೊಡುಗೆ ಪ್ರಧಾನ ಮಂತ್ರಿ ಹೇಳಿದರು . 

ಆರ್ ಬಿಐ ನಂತಹ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸಲು ಎನ್ ಡಿಎ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದೂ ಶ್ರೀ ಮೋದಿ ಹೇಳಿದರು. ನಾವು ಆರ್ ಬಿಐ ಕಾಯಿದೆಯನ್ನು ತಿದ್ದುಪಡಿ ಮಾಡಿದೆವು ಮತ್ತು ವಿತ್ತೀಯ ನೀತಿ ಸಮಿತಿಯನ್ನು ರಚಿಸಿದೆವು . ಇದು ದೀರ್ಘಕಾಲದಿಂದ ಉಳಿದಿತ್ತು . ನಮ್ಮ ಸರ್ಕಾರ ಇದನ್ನು ಪೂರ್ಣಗೊಳಿಸಿತು .ಈ ಸಮಿತಿಯಲ್ಲಿರುವ ಯಾವುದೇ ಸದಸ್ಯರು ಕೇಂದ್ರ ಸರ್ಕಾರಕ್ಕೆ ಸೇರಿಲ್ಲ ..”