ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನ ಮಂತ್ರಿಯಾಗಿ ಮೇ26, 2014ರಂದು ಅಧಿಕಾರ ಸ್ವೀಕರಿಸಿದ ಹೆಗ್ಗಳಿಕೆ ಶ್ರೀ ನರೇಂದ್ರ ಮೋದಿ ಅವರದು. ಲವಲವಿಕೆಯ, ಸಮರ್ಪಿತ, ಮತ್ತು ನಿರ್ಧಾರಿತ ಜೀವನ ಆಶಯಗಳು ಶ್ರೀ ನರೇಂದ್ರ ಮೋದಿ ಅವರಲ್ಲಿ ಗುರುತಿಸಬಹುದು, ಇದು ಕೋಟ್ಯಾಂತರ ಭಾರತೀಯ ಆಶಾವಾದವಾಗಿದೆ. 

ಜೀವಿತದ ಹಾದಿಯ ಕಟ್ಟಕಡೆಯ ಸಾಲಲ್ಲಿ ನಿಂತ ಅಸಹಾಯಕ ವ್ಯಕ್ತಿಯ ಅವಕಾಶಗಳನ್ನು ವಾಸ್ತವರೂಪಕ್ಕೆ ತರಲು, ತನ್ನ ಅಧಿಕಾರ ಪಡೆದ ಮೊದಲ ದಿನವೇ ಅಭಿವೃದ್ಧಿ ಕಾರ್ಯಯೋಜನೆಗಳಿಗೆ ಸನ್ನದ್ಧರಾದರು. ಅಂತ್ಯೋದಯ ಇವರ ಪಾಲಿಕೆ ಪ್ರೇರಕವಾಯಿತು.

ಸರಕಾರದ ಯೋಜನೆಗಳು ಉಪಕ್ರಮಗಳು ನಾವಿನ್ಯತೆಯ ರೂಪ ಪಡೆದವು. ಸರಕಾರದ ಆಡಳಿತ ಮುಕ್ತ, ಸರಳ ಮತ್ತು ಪಾರದರ್ಶಕ ವಾದವು.

ಪ್ರಧಾನ ಮಂತ್ರಿ ಜನ್ ಧನ್ ಯೋಜನಾ ಜನ ಸಾಮಾನ್ಯ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಏಕೀಕೃತ ರಹದಾರಿಯಾಯಿತು. ಹೂಡಿಕೆದಾರರ ಮತ್ತು ವ್ಯವಹಾರಿಕೋಧ್ಯಮಿಗಳ ಉತ್ತೇಜನಗೊಳಿಸಿದರು. ಸಣ೵ಣ ಮತ್ತು ಮಧ್ಯಮ ಕೈಗಾರಕೆಗಳ ತ್ತೇಜನ, ಯುವಕರ ಕೌಶಲ್ಯ ಅಭಿವೃದ್ದಿ,  ಕಾರ್ಮಿಕರ ಸುಧಾರಣೆ ಮತ್ತು ಗೌರವಕ್ಕಾಗಿ  ಶ್ರಮೇವ ಜಯತೆ ಉಪಕ್ರಮ ಜಾರಿಗೆ ತಂದರು.

ಬಡವರಿಗೆ ಸುರಕ್ಷತೆ ನೀಡಲು ವಿಮೆಯ ಯೋಜನೆ ಹಾಗೂ ಲಕ್ಷಾಂತರ ಜನರ ಜೀವನ ಬದಲಾಯಿಸುವ  ಡಿಜಿಟಲ್ ಭಾರತ – ನೂತನ ಯೋಜನೆ 2015ರಲ್ಲಿ ಪ್ರಾರಂಭಿಸಿದರು

2014ರ ಅಕ್ಟೋಬರ್ 2ರಂದು ಗಾಂಧಿಜಯಂತಿ ಸಂದರ್ಭದಲ್ಲಿ – ಸಾಮೂಹಿಕ ಸ್ವಚ್ಛತಾ ಅಭಿಯಾನವಾಗಿ – ಸ್ವಚ್ಛಬಾರತ್ ಯೋಜನೆ ಪ್ರಾರಂಭಿಸಿದರು . ಇದೊಂದು ಐತಿಹಾಸಿಕ ಬದಲಾವಣೆಯ ಪರ್ವ ವಾಯಿತು.

1950ರ ಸೆಪ್ಟೆಂಬರ್ 17ರಂದು ಗುಜರಾತಿ ಸಣ್ಣ ಹಳಿಳಿಯ ಬಡ ಕುಟುಂಬದಲ್ಲಿ ಜನಿಸಿದರು. ಹಣ ಇಲ್ಲದಿದ್ದರೂ ಪ್ರೀತಿಗೇನು ಕುಟುಂಬದಲ್ಲಿ ಕೊರತೆ ಇರಲಿಲ್ಲ. ಆರ್.ಎಸ್.ಎಸ್. ಜೊತೆ ಬೆರೆತು ರಾಷ್ಟ್ರೀಯತೆ ಮನೋಭಾವ ಬೆಳೆಯಿತು. ಶ್ರೀ ಮೋದಿ ಅವರು ಗುಜರಾತ್ ವಿಶ್ವವಿದ್ಯಾನಿಲಯದಿಂದ ಸಮಾಜ ಶಾಸ್ತ್ರದಲ್ಲಿ MA ಪದವಿ ಪಡೆದಿದ್ದಾರೆ.

2001ರಲ್ಲಿ , ಗುಜರಾತಿ ಮುಖ್ಯಮಂತ್ರಿಯಾದರು, ಅಲ್ಲದೆ ದಾಖಲೆಯ ಅವಧಿಗೆ ಮುಖ್ಯಮಂತ್ರಿಯಾಗಿ ಉಳಿದರು. ಅವರು ಗುಜರಾತನ್ನು ಬದಲಾಯಿಸಿದರು. ಬದಲಾವಣೆಯ ಹಾದಿ ಅಭಿವೃದ್ಧಿಯತ್ತ ಸಾಗಿತ್ತು.  ಪ್ರಕೃತಿಕ ವಿಕೋಪಗಳ ನಡುವೆ ಗುಜರಾತನ್ನು ಪುನಃ ಕಟ್ಟಿ ಬೆಳೆಸಿದರು. ಸಧೃಡ ಭಾರತಕ್ಕಾಗಿ  ಸಧೃಡ ಗುಜರಾತ್ ನಿರ್ಮಿಸಿದರು.

ಶ್ರೀ ನರೇಂದ್ರ ಮೋದಿ ಅವರು ಒಬ್ಬ ಜನರ ನಾಯಕ. ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಜೀವಿತ ತ್ಯಾಗ ಮಾಡಿದ ವ್ಯಕ್ತಿ. ಇವರು ದೇಶಕಂಡ ಅತ್ಯಂತ ತಂತ್ರಜ್ಞಾನ ಆಸಕ್ತ, ಹಾಗೂ Facebook, Twitter, Google+, Instagram, Sound Cloud, Linkedin, Weibo ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾದ ರಾಜಕಾರಣಿ.

ರಾಜಕೀಯ ಹೊರತಾಗಿ ಶ್ರೀ ನರೇಂದ್ರ ಮೋದಿ ಅವರು ಬರವಣಿಗೆಯಲ್ಲಿ ಆಸಕ್ತ ಹೊಂದಿದ್ದಾರೆ. ಇವರು ಯೋಗ ಮೂಲಕ ದಿನಚರಿ ಪ್ರಾರಂಭಿಸುತ್ತಾರೆ. ದಿನದ ಅತ್ಯಂತ ಕಠಿಣ ಹಾಗೂ ಬಿರುಸಿನ ಕಾರ್ಯ ಚಟುವಟಿಕೆ ನಡುವೆಯೂ ಅದು ಮನಸ್ಸಿಗೆ, ದೇಹಕ್ಕೆ ಶಾಂತತೆ, ನೀಡುತ್ತದೆ.

ಧೈರ್ಯವನ್ನು ಜೊತೆಯಲ್ಲೇ ಹೊತ್ತು ತಂದ , ಸಹಾನುಭೂತಿ, ನಿರ್ಣಯಗಳ ಪರಿಪಕ್ವತೆಯ ವ್ಯಕ್ತಿ ಇವರು, , ಇವರಲ್ಲಿ ದೇಶದ ಜನತೆ ತಮ್ಮಭವಿಷ್ಯಕಂಡರು, ಅವರಲ್ಲಿ ಭಾರತದ ಪುನರುತ್ಥಾನದ ಕನಸು ಕಂಡರು, ಜಾಗತಿಕಮಟ್ಟದಲ್ಲಿ ದೇಶದ ಶುಭ್ರ ಕೀರ್ತಿ ಪತಾಕೆ ಭಾನೆತ್ತರಕ್ಕೆ ಏರಿಸುವ ಧೃಡ ನಿಶ್ಚಯ ಜನತೆ ಇವರಲ್ಲ ಬಯಸಿದರು.