ಅಂದು 27 ಅಕ್ಟೋಬರ್ 2013 ಭಾನುವಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಲಿ ನಡೆಸಬೇಕಾಗಿದ್ದ ಪಾಟ್ಲಾದ ಗಾಂಧಿ ಮೈದಾನದಲ್ಲಿ ಅಚಾನಕ್ ಸರಣಿ ಬಾಂಬ್ ಗಳು ಸ್ಫೋಟಗೊಂಡಿದ್ದವು .
ಭಾಷಣ ಕೇಳಲು ಉತ್ಸಾಹಿ ಜನಸ್ತೋಮ ಅಲ್ಲಿ ನೆರೆದಿತ್ತು. ಅದೇ ವೇಳೆಗೆ ಒಂದರ ಮೇಲೊಂದರಂತೆ ಬಾಂಬ್ ಗಳು ಸಿಡಿದಿದ್ದವು
ಶ್ರೀ ನರೇಂದ್ರ ಮೋದಿಯವರು ಪಾಟ್ಲಾಗೆ ತಲುಪಿದಾಗ ಅವರ ಬಳಿ ಎರಡು ಆಯ್ಕೆಗಳಿದ್ದವು – ಒಂದು ರಾಲಿಯಲ್ಲಿ ಭಾಗಿಯಾಗದೇ ಗುಜರಾತ್ ಗೆ ವಾಪಸ್ ಹೋಗುವುದು. ಇನ್ನೊಂದು ( ಬಾಂಬ್ ಸ್ಫೋಟದ ಭೀತಿಯಲ್ಲಿದ್ದ ಸ್ಥಳದಲ್ಲಿ )ರಾಲಿಯನ್ನು ಉದ್ದೇಶಿ ಮಾತನಾಡುವುದು
ಶ್ರೀ ನರೇಂದ್ರ ಮೋದಿಯವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರಲ್ಲದೆ, ಹಿಂದು ಮತ್ತು ಮುಸಲ್ಮಾನರು ಅವರೊಳಗೆ ಹೋರಾಡೋದನ್ನು ಬಿಟ್ಟು ಬಡತನದ ವಿರುದ್ಧ ಹೋರಾಡಿ ಅನ್ನುವ ಮನವಿಯನ್ನೂ ಮಾಡಿದ್ರು. ಜೊತೆಗೆ ಇನ್ನೊಬ್ಬರಿಗೆ ತೊಂದರೆಯಾಗದಂತೆಶಾಂತ ರೀತಿಯಲ್ಲಿ ಪ್ರಚಾರ ಮಾಡಿ ಎಂದು ಪದೇ ಪದೇ ಮನವಿ ಮಾಡಿದ್ರು
ಇದಾದ ಬಳಿಕ ಶ್ರೀ ನರೇಂದ್ರ ಮೋದಿಯವರು ಭಾಷಣ ಮಾಡುತ್ತಿದ್ದ ವೇದಿಕೆ ಕೆಳಗೂ ಬಾಂಬ್ ಇತ್ತು ಅನ್ನೋ ಮಾತು ಕೇಳಿ ಬಂದಿತ್ತು.
ರಾಲಿನಡೆದವಾರದ ಬಳಿಕ ಮಾತನಾಡಿದ ಮೋದಿ “ ನಾನು ಸಂಘಟನಾ ವಿಭಾಗಗಳಲ್ಲಿ ಕೆಲಸ ಮಾಡಿದಾಗ ಸಿಕ್ಕಿದ ಅನುಭವ ನನಗೆ ರ್ಯಾಲಿಯಲ್ಲಿ ಭಾಗಿಯಾಗಲು ಪ್ರೇರೇಪಿಸಿತು. ಕೇವಲ ಪ್ರಾಣಿಯೊಂದುರಾಲಿಯ ಸ್ಥಳಕ್ಕೆ ಬಂದಿದೆ ಅನ್ನುವ ವದಂತಿ ಕೇಳಿದರೆ ಸಾಕು ಜನ ಗಾಬರಿಯಾಗುತ್ತಾರೆ.ಇನ್ನು ಬಾಂಬ್ ಇದೆ ಎಂದರೆ ಅವರ ಪಾಡೇನು. ಹೀಗಾಗಿ ನಾನು ರಾಲಿಯಲ್ಲಿ ಭಾಗಿಯಾಗಲು ನಿರ್ಧರಿಸಿದೆ.
ವಾರ ಕಳೆದ ನಂತರ ಮತ್ತೆ ಪಾಟ್ಲಾಗೆ ಭೇಟಿ ನೀಡಿದ ಶ್ರೀ ನರೇಂದ್ರ ಮೋದಿಯವರು ಬಾಂಬ್ ದಾಳಿಯಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದ ಕೊಂಡ ರೈತರ ಕುಟುಂಬಕ್ಕೆ ಸಾಂತ್ವನ ಹೇಳಿದ್ರು
ಪಾಟ್ಲಾದ ಹುಕರ್ ರಾಲಿ ಮಹತ್ವದ ತಿರುವು. ಇದು ಸದ್ಯದ ಪರಿಸ್ಥಿತಿಯಲ್ಲಿ ನಾಯಕ ಹೇಗಿರಬೇಕಾಗಿತ್ತು ಅನ್ನೋದನ್ನು ಸುಂದರವಾಗಿ ಚಿತ್ರಿಸಿತ್ತು. ಅಂದು ಬಡತನ ವಿರುದ್ಧ ಹೋರಾಡಿ , ತಮ್ಮೊಳಗಲ್ಲ ಎನ್ನುವ ಮೋದಿಯವರ ಸಂದೇಶ ಇಂದಿಗೂ ಕೋಟ್ಯಾಂತರ ಭಾರತೀಯ ಎದೆಯಲ್ಲಿ ಪ್ರತಿಧ್ವನಿಸುತ್ತಿದೆ .