2016ರ ಆಗಸ್ಟ್ 30ರಂದು ಗುಜರಾತ್‍ನ ಜಾಮ್‍ನಗರ ಜಿಲ್ಲೆಯಲ್ಲಿ ಏರ್ಪಟ್ಟ ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮಯಪ್ರಜ್ಞೆಯಿಂದಾಗಿ ಪತ್ರಕರ್ತರು ಹಾಗೂ ಕ್ಯಾಮರಾಮನ್‍ಗಳ ಜೀವ ಉಳಿದ ಘಟನೆ ನಡೆದಿದೆ.
ಗುಜರಾತ್‍ನಲ್ಲಿ ನೀರಿನ ಅಭಾವ ಎದುರಿಸುತ್ತಿರುವ ಸೌರಾಷ್ಟ್ರ ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದ ಮಹತ್ವಾಕಾಂಕ್ಷಿ ಸೌನಿ ಯೋಜನೆಯ ಉದ್ಘಾಟನಾ ಸಮಾರಂಭದ ವೇಳೆ ಈ ಘಟನೆ ನಡೆದಿದೆ.
ಪ್ರಧಾನ ಮಂತ್ರಿ, ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಇತರ ಅಧಿಕಾರಿಗಳೊಂದಿಗೆ ಪ್ರದರ್ಶಿಕೆಗಳನ್ನು ವೀಕ್ಷಿಸಿ, ಅಣೆಕಟ್ಟೆಯಿಂದ ನೀರಿನ ಹರಿವು ಆರಂಭಕ್ಕೆ ಗುಂಡಿ ಅದುಮುವವರಿದ್ದರು. ಆಗ ಶ್ರೀ ಮೋದಿ ಅವರು ಅಣೆಕಟ್ಟೆಯ ಕೆಳಭಾಗದಲ್ಲಿ ಇನ್ನೂ ಕೆಲವರು ನಿಂತಿರುವುದನ್ನು ಗಮನಿಸಿದರು. ಕ್ಯಾಮರಾಮನ್‍ಗಳಿಗೆ ತಾವು ಎಂತಹ ಅಪಾಯದ ಸ್ಥಳದಲ್ಲಿ ನಿಂತಿದ್ದೇವೆಂಬ ಪರಿವೆಯೇ ಇದ್ದಂತಿರಲಿಲ್ಲ. ತಕ್ಷಣವೆ ಶ್ರೀ ಮೋದಿ ಅವರು ಕೈಗಳೆನ್ನೆತ್ತಿ, ಚಪ್ಪಾಳೆ ತಟ್ಟಿ ಕ್ಯಾಮರಾಮನ್‍ಗಳನ್ನು ಎಚ್ಚರಿಸಿ, ಅಲ್ಲಿಂದ ತೆರಳುವಂತೆ ಸೂಚಿಸಿದರು. ಸಕಾಲದಲ್ಲಿನ ಈ ಎಚ್ಚರಿಕೆಯಿಂದಾಗಿ ಅನೇಕರ ಅಮೂಲ್ಯ ಜೀವ ಉಳಿಯಿತು.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕ್ಯಾಮರಾಮನ್ ಒಬ್ಬರು ಪ್ರಧಾನ ಮಂತ್ರಿ ತಮಗೆ ಹೊಸ ಬದುಕು ನೀಡಿದ್ದಾರೆ ಎಂದರು.
ಶ್ರೀ ಮೋದಿ ಅವರ ಸ್ಮಮಯಪ್ರಜ್ಞೆ ಆಗಾಗ ಹೆಚ್ಚಿನ ಶ್ಲಾಘನೆಗೆ ಪಾತ್ರವಾಗಿದೆ.
2015ರ ಏಪ್ರಿಲ್ 5ರಂದು ವಿಜ್ಞಾನಭವನದಲ್ಲಿ ಮುಖ್ಯಮಂತ್ರಿಗಳು ಹಾಗೂ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಭಾಗವಹಿಸಿದ್ದರು. ಆಗ ಛಾಯಾಗ್ರಾಹಕರೊಬ್ಬರು ಎಡವಿಬಿದ್ದರು. ಆಗ ಅವರಿಗೆ ಸಹಾಯಹಸ್ತ ಚಾಚಿದ್ದು ಬೇರಾರೂ ಅಲ್ಲ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ. ಈ ಘಟನೆ ಕೂಡ ತುಂಬ ಜನಪ್ರಿಯವಾಗಿದೆ.