ಸಂಘಟನೆಯಲ್ಲಿ ನಾವೀನ್ಯತೆ: 1980ರ ಗುಜರಾತ್ನ ಉದಾಹರಣೆ
ಗುಜರಾತ್ ಮುಖ್ಯಮಂತ್ರಿ ಹಾಗೂ ಪ್ರಧಾನಿ ಸ್ಥಾನ ಅಲಂಕರಿಸುವ ಮುನ್ನ ಮೋದಿ ಅವರು ತಮ್ಮ ಸಂಘಟನಾ ಸಾಮಥ್ರ್ಯಕ್ಕೆ ಹೆಸರಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೇ. ಪಂಚಾಯಿತಿ ಚುನಾವಣೆಯಿಂದ ಲೋಕಸಭೆ ಚುನಾವಣೆವರೆಗೆ ಸಾಂಸ್ಥಿಕ ಕೆಲಸಗಳಲ್ಲಿ ಅವರು ತೊಡಗಿಸಿಕೊಂಡಿದ್ದರು.
ಗುಜರಾತ್ನ ಬಿಜೆಪಿ ಘಟಕದ ಪ್ರಮುಖ ಮುಖಂಡರಲ್ಲಿ ಒಬ್ಬರಾಗಿದ್ದ ಅವರು, 1980ರ ಅಹಮದಾಬಾದ್ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ರೂಪಿಸಿದ ತಂತ್ರಗಳ ಮೂಲಕ ಅವರ ಸಂಘಟನಾ ಕೌಶಲವನ್ನು ಅರ್ಥ ಮಾಡಿಕೊಳ್ಳಬಹುದು.
ಸಾಂಸ್ಥಿಕ ಸಂಘಟನೆಯಲ್ಲಿನ ನವೀನತೆಯು ಎರಡು ಅಂಶಗಳನ್ನು ಆಧರಿಸಿತ್ತು. ಮೊದಲಿಗೆ-ಪ್ರತಿಯೊಬ್ಬ ಕಾರ್ಯಕರ್ತನಿಗೂ ನಿದರ್ಿಷ್ಟ ಗುರಿಯುಳ್ಳ ಕೆಲಸವನ್ನು ಕೊಡುವುದು ಹಾಗೂ ಆತ ನಿಗದಿತ ಗುರಿಯನ್ನು ಹೇಗೆ ತಲುಪುತ್ತಾನೆ ಎಂಬುದನ್ನು ಮೇಲುಸ್ತುವಾರಿ ಮಾಡುವುದು. ಎರಡನೆಯದಾಗಿ, ಕೆಲಸದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವಂತೆ ನೋಡಿಕೊಳ್ಳುವುದು. ನಗರ ಹಾಗೂ ಅದರ ಆಡಳಿತದಲ್ಲಿ ಎಲ್ಲರಿಗೂ ಪಾಲಿದೆ ಎಂಬ ಭಾವನಾತ್ಮಕ ಅಂಶವನ್ನು ಮನವರಿಕೆ ಮಾಡಿಕೊಡುವಲ್ಲಿ ಅವರು ಯಶಸ್ವಿಯಾದರು.
ಅಹಮದಾಬಾದ್ನ ಚುನಾವಣೆ ಪ್ರಚಾರದಲ್ಲಿ ಸಾಮುದಾಯಿಕ ಸಂಘಟನೆಯಲ್ಲಿ ಕಾರ್ಯಕರ್ತರನ್ನು ಸೂಕ್ತವಾಗಿ ಬಳಕೆ ಮಾಡಿಕೊಂಡು, 1000ಕ್ಕೂ ಅಧಿಕ ಸಮುದಾಯ ಮಟ್ಟದ ಗುಂಪು ಸಭೆಗಳನ್ನು ನಡೆಸಲಾಯಿತು. ಈ 1000 ಸಮುದಾಯ ಸಭೆಗಳನ್ನು ಆಯೋಜಿಸಲು 100 ಸ್ವಯಂ ಸೇವಕರಿಗೆ ತರಬೇತಿ ನೀಡಲಾಯಿತು. ಸಮುದಾಯ ಹಂತದ ಸಭೆಯಲ್ಲಿ ಕಾರ್ಯಕರ್ತರು ಏನು ಮಾಡಬೇಕು ಎಂಬ ಕುರಿತು ತಿಳಿಸಿ ಹೇಳುವುದು ತರಬೇತಿಯ ಉದ್ದೇಶ ವಾಗಿತ್ತು. ಯಾವ ವಿಷಯದ ಮೇಲೆ ಒತ್ತು ಕೊಡಬೇಕು ಹಾಗೂ ಯಾವ ರೀತಿ ಚಚರ್ೆ ನಡೆಸಬೇಕು ಎಂದು ತಿಳಿಸಿ ಕೊಡಲಾಯಿತು. ಚುನಾವಣೆ ಪ್ರಚಾರ ತಂತ್ರದಲ್ಲಿ ಇದೊಂದು ನವೀನ ಹಾಗೂ ಕಂಡುಕೇಳರಿಯದ ನಡೆ ಎನ್ನಬಹುದು.
ಸಮುದಾಯ ಹಂತದ ಸಭೆಗಳಲ್ಲಿ 25-30 ನಾಗರಿಕರ ಗುಂಪುಗಳು ಪಾಲ್ಗೊಂಡು, ಉತ್ತಮವಾಗಿ ಮಾತನ್ನಾಡಬಲ್ಲವರಿಗೆ ನಗರವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಲು ಉತ್ತೇಜನ ನೀಡಲಾಗುತ್ತಿತ್ತು. ಮಹಿಳೆಯರು ಈ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಮಧ್ಯಾಹ್ನ 2 ಗಂಟೆ ಬಳಿಕ ಪ್ರತ್ಯೇಕ ಸಭೆಗಳನ್ನು ಆಯೋಜಿಸಲಾಗುತ್ತಿತ್ತು. ಮುನಿಸಿಪಾಲಿಟಿ ಚುನಾವಣೆ ಪ್ರಚಾರಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ಬರುವಂತೆ ಮಾಡುವಲ್ಲಿ ಮೋದಿ ಯಶಸ್ವಿಯಾದರು.
ಸಂಘಟನೆಗೆ ಸಂಬಂಧಿಸಿದಂತೆ ಮೋದಿ ಅವರ ವೈಶಿಷ್ಟ್ಯದ ಬಗ್ಗೆ ಹೇಳಬೇಕಿದೆ. ಕಾರ್ಯಕರ್ತರಿಗೆ ಸೂಕ್ತ ತರಬೇತಿ, ಭಾವನಾತ್ಮಕ-ಸ್ಥಳೀಯ ಅಂಶಗಳನ್ನು ಒಳಗೊಂಡು ರೂಪಿಸಿದ ಈ ಕಾರ್ಯತಂತ್ರವು ಅಹಮದಾಬಾದ್ನ ಮುನಿಸಿಪಾಲಿಟಿಯಲ್ಲಿ ಬಿಜೆಪಿಯ ಗೆಲುವಿಗೆ ಅಗತ್ಯವಾದ ಬುನಾದಿಯನ್ನು ಹಾಕಿ ಕೊಟ್ಟಿತು. ಬಳಿಕ ಇದೇ ಕಾರ್ಯತಂತ್ರವನ್ನು ರಾಜ್ಯದೆಲ್ಲೆಡೆ ವಿಸ್ತರಿಸಲಾಯಿತು.
ಇದೇ ತಂತ್ರವನ್ನು ನಂತರದ ಎಲ್ಲ ಚುನಾವಣೆಗಳಲ್ಲಿ ನಿಷ್ಕೃಷ್ಟವಾಗಿ ಬಳಸಲಾಯಿತು. ಗುಜರಾತ್ನಲ್ಲಿ, ಮಹಾ ಕಾರ್ಯದಶರ್ಿಯಾಗಿ ಲೋಕಸಭೆ ಚುನಾವಣೆಯಲ್ಲಿ ಹಾಗೂ 2001ರಲ್ಲಿ ರಾಜಕೀಯಕ್ಕೆ ಸೇರ್ಪಡೆ ಗೊಂಡ ಬಳಿಕವೂ ಇದು ಮುಂದುವರಿಯಿತು. ಜನರೊಡನೆ ಸಂಪರ್ಕ ಸಾಧಿಸುವ ಹಾಗೂ ಅವರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಅವರ ಸಾಮಥ್ರ್ಯವು ನಿಜಕ್ಕೂ ಪ್ರಯೋಜನಕಾರಿಯಾಗಿ ಪರಿಣಮಿಸಿತು.