ಭಾರತವನ್ನು ಕೊಳೆಮುಕ್ತಗೊಳಿಸುವ ಉದ್ದೇಶದಿಂದ ಆರಂಭಿಸಿರುವ ಸ್ವಚ್ಛ ಭಾರತ್ ಆಂದೋಲನ ಭಾರತದ ಕೋಟ್ಯಂತರ ಜನರ ಬದುಕನ್ನು ತಟ್ಟಿದೆ.
2014ರ ಆಗಸ್ಟ್ 15ರಂದು ಕೆಂಪು ಕೋಟೆಯ ಆವರಣದಲ್ಲಿ ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನ ಮಂತ್ರಿಯವರು ಸ್ವಚ್ಛತೆಯ ಬಗ್ಗೆ ಮಾತನಾಡಿದ್ದರು. ಅದೇ ವರ್ಷದ ಅಕ್ಟೋಬರ್ 2ರಂದು ಸ್ವತಃ ಪೆÇರಕೆ ಹಿಡಿದು ಸ್ವಚ್ಛ ಭಾರತ ನಿರ್ಮಾಣದ ಅಭಿಯಾನವನ್ನು ಮುನ್ನಡೆಸಿದರು. ಅವರು ಆಗಾಗ ನೈರ್ಮಲ್ಯದ ಬಗ್ಗೆ ಮಾತನಾಡುತ್ತ ಅದನ್ನು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತಂದರು. ಸರಕಾರಿ ಕಾರ್ಯಕ್ರಮವಾಗಲೀ ಅಥವಾ ರಾಜಕೀಯ ರ್ಯಾಲಿಯಲ್ಲಾಗಲೀ, ಸಚ್ಛತೆಯ ವಿಷಯ ಸದಾ ಪ್ರಸ್ತಾಪವಾಗುತ್ತಿತ್ತು.
ಸಮಾಜದ ಎಲ್ಲ ವಲಯಗಳ ಜನರು ಸ್ವಚ್ಛ ಭಾರತ್ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದರು. ಮಾಧ್ಯಮಗಳು ಕೂಡ ಈ ಆಂದೋಲವನ್ನು ಬೆಂಬಲಿಸಿದವು.
ಸ್ವಚ್ಛ ಭಾರತ್ ಅಭಿಯಾನ ಮತ್ತು ಪ್ರಧಾನ ಮಂತ್ರಿಯವರ ಮಾತುಗಳು ಹೇಗೆ ದೇಶದ ಮೇಲೆ ಪ್ರಭಾವ ಬೀರಿದವು ಎಂಬುದಕ್ಕೆ ಚಂದ್ರಕಾಂತ್ ಕುಲಕರ್ಣಿ ಅವರ ಕೆಲಸಗಳಲ್ಲಿ ನೋಡಬಹುದು.
ನಿವೃತ್ತ ಸರಕಾರಿ ನೌಕರರಾಗಿರುವ ಚಂದ್ರಕಾಂತ್ ಕುಲಕರ್ಣಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಪಿಂಚಣಿದಾರರಾಗಿರುವ ಅವರು ಮಾಸಿಕ 16,000 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಸ್ವಚ್ಛ ಭಾರತ್ ಅಭಿಯಾನದಿಂದ ಪ್ರೇರೇಪಿತರಾದ ಈ ಉದ್ದೇಶಕ್ಕಾಗಿ ಅವರು ಪ್ರತಿ ತಿಂಗಳು 5,000 ರೂ. ದೇಣಿಗೆ ನೀಡಲು ನಿರ್ಧರಿಸಿದರು. ಮಾತ್ರವಲ್ಲ, ಮುಂಬರುವ ತಿಂಗಳುಗಳಿಗಾಗಿ ಆಯಾ ತಿಂಗಳ ದಿನಾಂಕವನ್ನು ನಮೂದಿಸಿದ 52 ಚೆಕ್‍ಗಳನ್ನೂ ನೀಡಿದರು.
ನಿರ್ಮಲ ಭಾರತಕ್ಕಾಗಿ ಪಿಂಚಣಿದಾರರೊಬ್ಬರು ತಮ್ಮ ಪಿಂಚಣಿಯ ಮೂರನೇ ಒಂದರಷ್ಟು ಮೊತ್ತವನ್ನು ನೀಡಿದ್ದಾರೆ. ಇದು ಪ್ರಧಾನ ಮಂತ್ರಿಯವರ ಮಾತುಗಳು ಜನರ ಮನಸ್ಸಿನಲ್ಲಿ ರೂಪಿಸಿರುವ ನಂಬಿಕೆ ಹಾಗೂ ದೇಶವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ತಾವು ಅವಿಭಾಜ್ಯ ಅಂಗ ಎಂಬ ಭಾವನೆಯನ್ನು ನಾಗರಿಕರು ಹೊಂದಿರುವನ್ನು ತೋರಿಸುತ್ತದೆ.
ಶ್ರೀ ಮೋದಿಯವರು ಇಂತಹ ಅನೇಕ ದೃಷ್ಟಾಂತಗಳನ್ನು ಹಂಚಿಕೊಂಡಿದ್ದು, ನಿರ್ಮಲ ಭಾರತ ನಿರ್ಮಾಣದಲ್ಲಿ ಜನರು ಒಗ್ಗೂಡಿ ಪ್ರಯತ್ನಿಸುತ್ತಿರುವುದನ್ನು ವಿವರಿಸಿದ್ದಾರೆ. ಅವರ ಬಹುತೇಕ `ಮನ್ ಕಿ ಬಾತ್’ ಕಾರ್ಯಕ್ರಮಗಳು ನೈರ್ಮಲ್ಯದ ಬಗ್ಗೆ ಕನಿಷ್ಠ ಒಂದು ದೃಷ್ಟಾಂತವನ್ನಾದರೂ ಹೊಂದಿದೆ.
ಭಾರತ ಪ್ರಗತಿಗೆ ಪೂರಕವಾಗಿರುವ ಸ್ವಚ್ಛತೆಯ ಬಗ್ಗೆ ಸಾರ್ವಜನಿಕ ಆಂದೋಲನ ರೂಪಿಸುವಲ್ಲಿ ಪ್ರಧಾನ ಮಂತ್ರಿಯಾಗಿ ಶ್ರೀ ಮೋದಿ ಖಂಡಿತವಾಗಿಯೂ ಯಶಸ್ವಿಯಾಗಿದ್ದಾರೆ.